ಈ ಆಟಕ್ಕಂತೂ ಎಷ್ಟು ಜನರಿದ್ದರೂ ನಡೆಯುತ್ತದೆ. ಕನಿಷ್ಠ 5 ಜನರಿದ್ದರೆ ಚೆನ್ನ. ಒಬ್ಬರು ಇನ್ನೊಬ್ಬರ ಕಣ್ಣು ಮುಚ್ಚಿ ಎದುರಿನಲ್ಲಿರುವವರು ಯಾರೆಂದು ಬೆರಳು ತೋರಿಸಿ ಕೇಳುತ್ತಾರೆ.
ಆಗ ಮುಂಚೆಯೇ ನಿಂತಿದ್ದ ಮಕ್ಕಳು ಅದಲು ಬದಲಾಗುತ್ತಾರೆ. ಅವರನ್ನು ಸರಿಯಾಗಿ ಗುರುತಿಸಿದರೆ ಮತ್ತೆ ಅವರು ಕಳ್ಳರಾಗುತ್ತಾರೆ.
ಹೀಗೆ ಹತ್ತು ಹಲವು ಆಟಗಳು ಯಾವುದೇ ಖರ್ಚಿಲ್ಲದೆ ಮಕ್ಕಳಿಗೆ ಮನರಂಜನೆ ಒದಗಿಸಬಲ್ಲವು. ಇಂಥ ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಕೀಳರಿಮೆ,
ಖಿನ್ನತೆ, ಶೀಘ್ರ ಕೋಪಗೊಳ್ಳುವಿಕೆ ಶಮನವಾಗುತ್ತದೆ. ಗೆಳೆತನ ವೃದ್ಧಿಯಾಗುತ್ತದೆ. ಈ ಆಟಗಳನ್ನು ಆಡಿಸಲು ದೊಡ್ಡವರ ಅವಶ್ಯ ಕೂಡ ಇಲ್ಲ
- Read more about ಅವರ್ನ ಬಿಟ್ ಇವರ್ಯಾರು
- Log in or register to post comments
ಸಾವಿರಾರು ವರುಷದ ಇತಿಹಾಸ ಪರಂಪರೆಯಲ್ಲಿ ನಮ್ಮ ಜೀವನ ಒಂದು ಕೊಂಡಿ ಮಾತ್ರ. ಸಂಸ್ಕೃತಿ, ನಾಡು ನುಡಿನ್ನು ನಾವಷ್ಟೆ ಅಲ್ಲೆದೆ ಅದನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ . ಈಗಿನ ಪಾಷ್ಚಾತ್ಯ ಓಟದ ಜೀವನ ಶೈಲಿಯ ನಡುವೆ, ಅವು ಮರೆತು ಹೋಗುವ ಮುನ್ನ, ಚಿಕ್ಕಂದಿನಲ್ಲಿ ನೋಡಿದ, ಕಲಿತ ಅದೆಷ್ಟೋ ವಿಷಯಗಳಲ್ಲಿ, ಕೆಲವನ್ನಾದರೂ ಒಟ್ಟು ಮಾಡುವ ಕೆಲಸ ಮಾಡಬೇಕಿದೆ.